Wednesday, January 23, 2008

ವಿಮರ್ಶೆಗೊಂದು ವಿಮರ್ಶೆ ಅನ್ಕೊಬಹುದು!



ತುಂಬಾ ಹಳೆಯ ವಿಷಯವೇನಲ್ಲ. ಮೊನ್ನೆಯ ಮೊನ್ನೆಯ ಮಾತು ಒಂದು ತಮಿಳು ಚಿತ್ರದ ಬಗ್ಗೆ ನಮ್ಮ ದೇವಶೆಟ್ಟಿ ಎಂಬ (ವಿ)ಚಿತ್ರ ವಿಮರ್ಶಕರು ವಿಜಯ ಕರ್ನಾಟಕ ಪತ್ರಿಕೆಯ ತುಂಬ ಹೇತರಾಡಿ ಮಾಡಿದ್ರು ಕಡೆಗೆ ಸಿನಿಮಾ ನೋಡಿದರೆ ದೇಹದ ಯಾವ ಭಾಗದಿಂದ ನಗಬೆಕು ಅಂತ ತಿಳಿಲಿಲ್ಲ. ಇನ್ನು ಮೂಲ ವಿಷಯ ಮೊನ್ನೆ ಶುಕ್ರುವಾರ ಬಿಡುಗಡೆಯಾದ ನಮ್ಮೆಲ್ಲರ ಹೆಮ್ಮೆಯ ನಿರ್ದೇಶಕ ಯೋಗರಾಜ ಭಟ್ರ ಗಾಳಿಪಟದ ಚಿತ್ರ ವಿಮರ್ಶೆಯನ್ನ ನಮ್ಮ ದೇವಶೆಟ್ಟಿಯವರು ಶನಿವಾರವೇ ಬರೆದರು "ಮುಂಗಾರುಮಳೆ ಹ್ಯಾಂಗೋವರನಿಂದ ಭಟ್ಟು ಇನ್ನು ಹೊರ ಬಂದಿಲ್ಲ" ಇದು ಚಿತ್ರದ ಒನ್ ಲೈನ ವಿಮರ್ಶೆಯಂತೆ ಅದೂ ಮುಖಪುಟದಲ್ಲಿ ಬಂತು ಇದು ಮುಖಪುಟದ ವಿಷಯವಾ. ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಶುರುವಾದ ತಕ್ಷಣಕ್ಕೆ ತಿಳಿಯುವ ವಿಷಯವೆಂದ್ರೆ ಇದು ಮುಂಗಾರುಮಳೆಯಲ್ಲ ಅಂತ ಹಾಗಂತ ಚಿತ್ರನೋಡಿದ ಪ್ರತಿಯೊಬ್ಬರು ಹೇಳ್ತಾರೆ. ಈ ಶೆಟ್ರು ಮುಂಗಾರುಮಳೆನಾ ತಲೆಲಿಇಟ್ಟುಕೊಂಡು ಗಾಳಿಪಟ ನೋಡಿದ್ರೆ ಅದು ಯೋಗರಾಜ ಭಟ್ರ ತಪ್ಪಾ. ಅಥವಾ ಸಿನಿಮಾ ನೋಡೊಕೆ ಅಂತ ಹೋದಾಗ ಶೆಟ್ರಿಗೆ ಯಾರಾದ್ರೂ ಅಮೇದ್ಯ ಸೇವನೆ ಮಾಡಿಸಿ ಈ ರೀತಿ ಬರೆಸಿದ್ರಾ ಇದನ್ನ ಶೆಟ್ರೆ ಹೇಳಬೇಕು. ಅದೇ ಹಸಿರು, ಅದೇ ಮಳೆ, ಅದೇ ಗಾಳಿ, ಅದೇ ಹಸಿ ಹಸಿ, ಅದೇ ಮಾತು ಅಂತ ಬರಿತಿರಲ್ಲಾ ಮಾತೆತ್ತಿದರೆ ವಿದೇಶ ಅನ್ನೊ ನಮ್ಮ ನಿರ್ದೇಶಕರಿಗಿಂತ ಕರ್ನಾಟಕದಲ್ಲೇ ಇಷ್ಟೊಂದು ಜಾಗಗಳಿವೆ ಅಂತ ತೋರಿಸಿದ್ದು ತಪ್ಪಾ ವಿಮರ್ಶಕರೆ. ಅಥವಾ ನಿಮಗ್ಯಾವುದಾದರು ಹೊಸಾ ಲೊಕೆಶನ್ ಗೊತ್ತಾ ಹ್ಯಾಗೆ? . ಅಲ್ಲಾರಿ ಮುಂಗಾರುಮಳೆ ಸಿನಿಮಾ ಬರೊದಕ್ಕಿಂತ ಮುಂಚೆ ಅದೆ ಮಚ್ಚು, ಅದೇ ಕೊಲೆ, ಅದೇ ಹಳಸಲು ಡೈಲಾಗು, ಅದೇ ಭೂಗತ ಜಗತ್ತು ಅಂತ ರಕ್ತದ ಮಡುವಿನಲ್ಲಿ ಬಿದ್ದು ವದಾಡ್ತಾ ಇದ್ರಲ್ರೀ ಆಗೆಲ್ಲೆದ್ರಿ ? ಓಹೋ ಕ್ಷಮಿಸಿ ಬಹುಶಃ ನೀವು ಆತ್ಮಚರಿತ್ರೆ ಬರೆಯುವುದರಲ್ಲಿ ಬಿಜಿ ಇದ್ರಿ ಅಂತ ಕಾಣುತ್ತೆ. ಕ್ಯಾಮರಾ ಮನ್ ಅಲ್ಲಿಂದ ಇಲ್ಲಿಗೆ ಕರೆಸಿ ಕೊಟ್ಟಿದ್ದು ಇಷ್ಟೇನಾ ಅಂತ ಕೇಳ್ತಿರಲ್ಲಾ, ಒಂದು ಕನ್ನಡ ಸಿನಿಮಾನಾ ಇದಕ್ಕಿಂತ ಅದ್ಭುತವಾಗಿ ಹ್ಯಾಗೆ ತೋರಿಸೊದು ಅಂತ ಸ್ವಲ್ಪಾ ನಮಗೂ ಹೇಳ್ತಿರಾ ವಿಮರ್ಶಕರೇ. ಮನುಷ್ಯರಲ್ಲಿ ವಿಶಾಲ ಮನೋಭಾವಾ ಅಂತ ಒಂದು ಇರುತ್ತೆ ಅದರ ಬಗ್ಗೆ ನಿಮಗೆನಾದ್ರೂ ಗೊತ್ತಾ. ಗಂಡು ಹುಡುಗಿ, ಕಪ್ಪೆ ಮುಖದವಳು, ಏನ್ರಿ ನೀವು ಒಬ್ಬ ಜವಾಬ್ದಾರಿಯುತ ಪತ್ರಕರ್ತರಾಗಿ ಪತ್ರಿಕೆಯಲ್ಲಿ ಹೆಣ್ಣುಮಕ್ಕಳನ್ನ ಕರೆಯುವ ರೀತಿಯಾ ಇದು. ಅಕಸ್ಮಾತ ಈ ಸಿನಿಮಾದಲ್ಲಿ ನಿಮ್ಮ ಮನೆಯ ಹೆಣ್ಣುಮಕ್ಕಳು ಇದ್ದಿದ್ರೆ ಹೀಗೆಲ್ಲಾ ಬರಿತಿದ್ರಾ ಸಾರ್. ಕಪ್ಪೆ ಮುಖದವರು, ಅತೀಲೋಕ ಸುಂದರಿಯರು ಎಲ್ಲರೂ ಮನುಷ್ಯರೆ ಸರ್ ನಿಮಗೆ ಹುಡುಗಿಯರು ಅಂದ್ರೆ ಇಂದ್ರನ ಆಸ್ಥಾನದ ಅಪ್ಸರೆಯರೇ ಆಗಬೇಕೊ?? ಚಿತ್ರದಲ್ಲಿ ಹಂದಿ ಅನವಶ್ಯಕ ಅಂತೀರಲ್ಲಾ ಕಥೆ ಇರೋದೆ ಅಲ್ಲಿ ಮತ್ತು ಅಷ್ಟು ಸಣ್ನ ಕಥಾ ಎಳೆಯಿಂದ ಕನ್ನಡಕ್ಕೆ ಒಂದು ಟೆಕ್ನಿಕಲ್ಲಿ ಅದ್ಭುತ ಎನಿಸುವಂತಹ ಚಿತ್ರ ಕೊಟ್ರು ಅಂತ ನಿಮಗೆ ಅನಿಸಲೇ ಇಲ್ವಾ. ಚಿತ್ರದಲ್ಲಿ ಗಣೇಶನಿಗೆ ಜಾಸ್ತಿ ಇದೆ ನಿಜ ಆದ್ರೆ ಅದು ಕಮರ್ಷಿಯಲ್ ವಿಷಯ ಅಕಸ್ಮಾತ ಗಾಳಿಪಟಕ್ಕೆ ನೀವು ನಿರ್ದೇಶಕರಾಗಿದ್ರೆ ನೀವು ಅದನ್ನೇ ಮಾಡತಿದ್ರಿ. ಸ್ವಾಮಿ ನಿಮ್ಮ ವಿಮರ್ಶೆಯ ಗಾಳಿಪಟದ ಸೂತ್ರ ಕಿತ್ತು ಅಲ್ಲೆಲ್ಲೊ ಪಕ್ಕದ ರಾಜ್ಯದಲ್ಲಿ ಬಿದ್ದಿದೆ ಮೊದಲು ಅದನ್ನ ಹುಡುಕಿ ತನ್ನಿ. ಹೊಗಳ್ತಾ ಇದ್ರೆ ನಿಮ್ಮನ್ನ ಹೊಗಳ್ತಾನೆ ಇರ್ಬೆಕು ಅನ್ಸುತ್ತೆ. ಹೋಗಿ ಸಾರ್ ಇನ್ನೊಂದೆರಡು ಜೀವನಚರಿತ್ರೆ ಬರೆದು ಬನ್ನಿ ಆಮೇಲೆ ಇದ್ದೇ ಇದೆ ನಿಮ್ಮ ವಿಮರ್ಶೆ ಬರೆಯೋದು.ಕನ್ನಡಿಗರಾಗಿ ಕನ್ನಡಿಗರ ಬಗ್ಗೆ ಇಷ್ಟೊಂದು "ವಿಷ" ಸರಿ ಅಲ್ಲ ಹೌದು ನೀವು ಕನ್ನಡಿಗರೆ ತಾನೆ? ಅಲ್ಲಾ ನನಗೆ ಗೊತ್ತಿಲ್ಲಾ

ಕೊನೆಯದಾಗಿ ಗಾಳಿಪಟದಲ್ಲಿ ನಿವು ಗಂಡುಹುಡುಗಿ ಅಂತ ಹೆಸರಿಸಿರೊ ನೀತು ಸ್ಟೈಲ್ ನಲ್ಲೆ ನಿಮ್ಮ ಚಿತ್ರ ವಿಮರ್ಶೆಗೆ ತಡವಾಗಿಯಾದ್ರೂ ನನ್ನ ಕಡೆಯಿಂದ ದೊಡ್ಡದಾಗಿ ಥೂ................