Wednesday, December 26, 2007

ಎನ್ನ ಭವದ ಕೇಡು

ಈ ಕಾದಂಬರಿಯ ಬಗ್ಗೆ ಎನಾದರೂ ಬರೆಯದೆ ಇರೋಕೆ ನನ್ನಿಂದ ಸಾಧ್ಯವೇ ಇಲ್ಲ ಅನ್ನುವಷ್ಟರ ಮಟ್ಟಿಗೆ ನನ್ನನ್ನು ಆವರಿಸಿಕೊಂಡಿದೆ.
ಇದರಲ್ಲಿ ಬರುವ ಗೋವರ್ಧನರಾಯರು, ಪೇಶ್ವೆ ಕಾಲಕ್ಕೆ ಅಹ್ಮದ ನಗರದಿಂದ ನೆಲೆಕಿತ್ತು ಮೂಡಿಗೆರೆಗೆ ಬಂದ ಅವರ ತಂದೆ ಶ್ರೀಹರಿರಾಯರು, ಗೋವರ್ಧನರಾಯರ ಎರಡನೇಯ ಸಂಸಾರ ರಾಧಾ,ಮಕ್ಕಳಾದ ಗಂಗೆ, ಗೋದಾವರಿ ಯಮುನೆ, ಸರಸ್ವತಿ, ರಾಧಾ ಅಂಬಕ್ಕ, ಕಣ್ಣಿರಿನ ಹುಡುಗಿಯನ್ನು ಡೋಲಾಯನ ಸ್ಥಿತಿಗೆ ದೂಡುವ ವಾಸುದೇವ, ಡಾಕ್ಟರ ಮಗ ಅಜಿತ, ಗೋವರ್ಧನರಾಯರ ರಾಜಕಾರಣಿ ಸ್ನೇಹಿತ ಪಂಪಾಪತಿ,ದೂರ್ತ ನೌಕರ ಚಿನ್ಸಾಮಿ, ಸಮಯದ ಫಾಯಿದೆ ತೆಗೆದುಕೊಳ್ಳುವ ಕೃಷ್ಣಮೂರ್ತಿ,ದ್ರೈವರ್ ಅಬ್ಬೂ, ಸಂಗೀತಗಾರ ಬಸ್ರಾಜ,ಇವರೆಲ್ಲರೂ ತಮ್ಮ ತಮ್ಮ ಪಾತ್ರ ಮುಗಿಸಿ ಎದ್ದು ಹೋದರು ಬೃಂದಾವನ ಬಿಡಲೊಲ್ಲೆ ಎನ್ನುವ ಇವರೆಲ್ಲರ ಅಧಿನಾಯಕಿ ಮಾಮಿ,ಅವಳ ಸಾವಿನ ವಾಸನೆ ಪತ್ತೆ ಹಚ್ಚುವ ವಿದ್ಯೆ, ಮಾಮಿಯ ತಿಂಗಳ ಸ್ನಾನದ ವೃತ, ಬೃಂದಾವನದ ಹಿತ್ತಲಿನ ಕರಿಬೇವಿನ ಕಂಪು, ನಮ್ಮನ್ನು ಕಾದಂಬರಿ ಮುಗಿಸಿದ ಮೇಲೂ ಕಾಡುತ್ತಿರುತ್ತವೆ.

ಹೋಟಲ್ಲುಗಳ ಸರಮಾಲೆಯೆ ಇದ್ದ ಮನೆಯಲ್ಲಿ ಗಂಗೆ ಸತ್ತ ಮೂರೇ ದಿನಕ್ಕೆ ಮನೆಯಲ್ಲಿ ತಿನ್ನಲು ಏನು ಇರುವುದಿಲ್ಲ . ಇದು ಕಾದಂಬರಿ ಓದುವಾಗ ಅರಗಿಸಿಕೊಳ್ಳಲು ಕಷ್ಟವಾದರು ವಾಸ್ತವತೆಗೆ ಹತ್ತಿರವಾದದ್ದೆ.
ಡಾವಣಗೆರೆಯಲ್ಲಿ ಕಾಟನ್ ಮಿಲ್ಲುಗಳಿದ್ದಾಗ ನಡೆಯುತ್ತಿದ್ದ ದರ್ಬಾರಗಳು, ನಿಂತಾಗ ಒಂದೊಂದಾಗಿ ಬಿದಿಗೆ ಬಿದ್ದ ಸಂಸಾರಗಳು, ಅಲ್ಲಿನ ಯೂನಿಯನ್ನಗಳು,ಅದರ ಲೀಡರ್ರುಗಳು, ಅವರ ಕಚ್ಚಾಟಗಳು ಕಣ್ಣಿಗೆ ಕಟ್ಟುವಂತಿವೆ.
ಇವೆಲ್ಲಾ ಒಂದು ಕಡೆಯಾದರೆ ಗೋವರ್ಧನರಾಯರ ಸಂಸಾರಭವ ಹಂತಹಂತವಾಗಿ ಕುಸಿಯುವ ರೀತಿ ಕಲ್ಲು ಹೃದಯವನ್ನು ಕರಗಿಸುತ್ತದೆ. ಇನ್ನೊಂದು ಕಡೆ ನಮಗೆ ಸುಳಿವೆ ಕೊಡದೆ ಕಥೆಯೊಂದಿಗೆ ಸಾಗುವ ಸಂಗೀತ, ಅಲ್ಲಿ ಅರಳುವ ಪ್ರೀತಿ, ಅಡುಗೆ ಮನೆಯಲ್ಲೆ ಜಗತ್ತು ಮತ್ತು ತನ್ನ ಪ್ರೀತಿಯನ್ನು ಕಂಡುಕೊಳ್ಳುವ ಸರಸ್ವತಿಯ ರೀತಿ, ಸಂಸಾರ ಮತ್ತು ಮಕ್ಕಳು ಬೇಡವೆಂದ ಮಾಮಿಯ ಯೌವನದ ಮೊದಲ ಹಂತದಲ್ಲಿ ಮುಗ್ಗರಿಸಿದ ಪ್ರೇಮ ಪ್ರಕರಣ,ನೆರಳೆ ಬಣ್ಣದ ಚಾಯೆ ಇಡೀ ದಾವಣಗೆರೆಗೆ ಆವರಿಸುವ ವಿಸ್ಮಯ, ನಾವೆಲ್ಲಾ ಮರೆತೆ ಹೋಗಿರುವ ಶಾವಿಗೆ ಹೊಸೆಯುವ ಸಂಭ್ರಮ, ಕಾದಂಬರಿಯನ್ನು ಹಂಚಿಕೊಂಡರೆ ಮತ್ತೊಮ್ಮೆ ಇಡೀ ಕಾದಂಬರಿಯನ್ನೆ ಹೇಳಬೇಕಾದಿತು.

ಯಮುನೆ ಮತ್ತು ಗೋದಾವರಿಯ ಪಾತ್ರಗಳನ್ನು ಹೀಗೂ ಹೇಳಬಹುದೆನೊ ಮನುಷ್ಯ ಯೋಚಿಸುವುದನ್ನು ನಿಲ್ಲಿಸಿದರೆ ಯಮುನೆಯಂತಾಗುತ್ತಾನೆ। ದುಡುಕಿದರೆ ಗೋದಾವರಿಯಂತಾಗುತ್ತಾನೆ। ನಾವು ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿಯೆಂದರೆ ನಾವು ಕೇವಲ ಇದನ್ನು ಓದುವುದಿಲ್ಲ ಪಾತ್ರಗಳೆ ನಾವಾಗುತ್ತೆವೆ ಅದು ಸುರೇಂಧ್ರನಾಥರ ಕಥೆ ಹೇಳುವ ಪರಿ। ಚಂದನೆಯ ಕಾದಂಬರಿ ಕೊಟ್ಟ ಸುರೇಂಧ್ರನಾಥರಿಗೂ ಛಂದವಾಗಿ ಪ್ರಕಟಿಸಿದ ವಸುಧೇಂದ್ರರಿಗೂ ನನ್ನ ಧನ್ಯವಾದಗಳು

ನೀವು ಕೊಂಡು ಓದಿ

2 comments:

Anonymous said...

ಮಲ್ನಾಡ್ ಹುಡ್ಗಿ

ಕಾದಂಬರಿಯ ಮೊದಲಲ್ಲಿ heroin ಅನ್ನಿಸುವ, supernatural ಅನ್ನಿಸುವ ನೀಲಿ ಕಣ್ಗಳ ಮಾಮಿ ಬರಬರುತ್ತಾ ತುಂಬ ಹಠ ಮಾಡ್ತಾಳಲ್ಲ ಅನ್ನಿಸುತ್ತೆ, ಯಾಕೋ ಕೊನೇವರೆಗೂ ಭಯಪಡಿಸುತ್ತಾಳೆ. but u cant hate her. ಸರಸ್ವತಿ ಕಣ್ಣೀರಲ್ಲೇ ಕೈತೊಳೀತಿದ್ರೂ... ಮಾಮಿ ಸಾಯಲಿ ಅನ್ನಿಸುವುದಿಲ್ಲ. ಇಡೀ ಕಾದಂಬರಿಯಲ್ಲಿ ಯಾವುದೆ ಪಾತ್ರ ತುಂಬ ಒಳ್ಳೆಯದೋ ಅಥವ ತುಂಬ ಕೆಟ್ಟದೋ ಅನ್ನಿಸುವುದಿಲ್ಲ.. ನಿಜಜೀವನದಲ್ಲೂ ಹಾಗೇ ಅಲ್ಲವ? ತುಂಬ realistic ಅನ್ನಿಸಿತು.... ನಾಗಲಿಂಗ ಪುಷ್ಪ, ಕೆಂಪುದಾಸವಾಳ, ಸುತ್ತಲೂ ಹರಡುವ ನೀಲಿ ಬಣ್ಣ, ಇವೆಲ್ಲದರ ಜೊತೆ 'ಮಾಮಿ'.... ಕಂಗೆಡಿಸಿದಳು.

ಮಹೇಶ ಎಸ್ ಎಲ್ said...

nimma maatu noorakke nooru rastu sattyakke hattirvaagide.
malnad hudgige ondu
thanks nimma anisikeyannu hanchikondaddakke