ನಾವು ಇಂದು ನೋಡುತ್ತಿರುವ, ಅನುಭವಿಸುತ್ತಿರುವ ಗಬ್ಬುತನವನ್ನು ಬೀಚಿಯವರು ಅಂದೇ ಕಂಡಂತಿದೆ । ಅವರ "ಉತ್ತರಭೂಪ" ಕೃತಿಯಿಂದ ಆಯ್ದ ಪ್ರಶ್ನೋತ್ತರಗಳು ಹೀಗಿವೆ।
ನಮ್ಮ ದೇಶದಲ್ಲಿರುವ ಅದ್ಭುತಾಶ್ಚರ್ಯಗಳಾವುವು??
ಬೇಕಾದಷ್ಟಿವೆ-ಹಣ ಮಾಡದ ರಾಜಕಾರಣಿ,ವಿನಯಶೀಲ ಸಾಹಿತಿ,
ಲೈಟ ಕಂಬಕ್ಕೆ ಕಲ್ಲು ಹೊಡೆಯದ ವಿದ್ಯಾರ್ಥಿ,
ಎಲ್ಲ ತಪ್ಪೂ ವಿದ್ಯಾರ್ಥಿಯದೇ ಅನ್ನದ ಗುರು,
ಹೆಂಡತಿಗೆ ಹೆದರದ ಅಧಿಕಾರಿ,
ಗಂಡನ ಮೇಲೆ ಸಂಶಯವಿಲ್ಲದ ಹೆಂಡತಿ,
ತಾನು ತ್ರಿಲೋಕ ಸುಂದರಿ ಎಂದು ತಿಳಿಯದ ಹೆಣ್ಣು,
ಅಂತಹವಳು ಹಿಂದು ಬರುವಾಗ ತಿರಿತಿರಿಗಿ ನೋಡದ ಮುದುಕ,
ಅಪಪ್ರಚಾರಕ್ಕೆ ಆಸ್ಪದ ಕೊಡದ ಸ್ವಾಮಿಗಳು-ಈ ಒಂಬತ್ತು ಅದ್ಭುತಾಶ್ಚರ್ಯಗಳಲ್ಲವೇ??
ಈಗ ಇವುಗಳನ್ನ ಇಂದಿಗೆ ಹೀಗೆ ಹೊಲಿಸಬಹುದೆ।
ಪಕ್ಷ ಬಿಟ್ಟು ಹೊಗುತ್ತೆನೆ ಎಂದು ಹೇಳುವ ಸಹ ರಾಜಕಾರಣಿಗೆ ನಿನ್ನ ಹಗರಣಗಳನ್ನು ಬಯಲಿಗೆಳೆಯುತ್ತೆನೆ ಅನ್ನದ ರಾಜಕಾರಣಿ,
ಬಡ್ಡಿ ಇಲ್ಲದೆ ಸಾಲ ನೀಡುವ ಬ್ಯಾಂಕುಗಳು,
ಕರೆದಲ್ಲಿಗೆ ಬರುವ ಬೆಂಗಳೂರಿನ ಅಟೋಗಳು,
ಹಗರಣಗಳಿಲ್ಲದ ಸಂಸ್ಥೆಗಳು,
ವಶಿಲಿಗಳಿಲ್ಲದೆ ಸಿಗುವ ನೌಕರಿಗಳು,
ಐದು ವರ್ಷ ಸ್ಥಿರವಾಗಿ ನಡೆಯುವ ಸರ್ಕಾರಗಳು,
ಸಹೊದ್ಯೋಗಿಗಳಿಗೆ ಕಿರಿಕಿರಿ ಮಾಡದ ಪ್ರೊಜೆಕ್ಟ ಮ್ಯಾನೆಜರಗಳು,
ಆಸ್ತಿಯಿಲ್ಲದ ಹೈಟೆಕ್ ಸ್ವಾಮಿಗಳು,
ಮತ್ತು ಹೋದ ತಕ್ಷಣಕ್ಕೆ ಆಗುವ ಸರ್ಕಾರಿ ಕೆಲಸಗಳು।
ಇನ್ನಷ್ಟು ಬೀಚಿಯವರ ಬರಹಗಳು ಹೀಗಿವೆ।
ಮನುಷ್ಯನ ಅಧ:ಪತನದ ನಾಂದಿ, ಯಾವುದು??
ಪರ ವಂಚನೆಯಿಂದ ನಾಂದಿ, ಆತ್ಮ ವಂಚನೆಯಿಂದ ಮುಕ್ತಾಯ।
ಇನ್ನೊಂದು
ದಿನದಿನಕ್ಕೆ ಮಾನವ ಸುಧಾರಿಸಿದಂತೆ
ಅವನ ಅಕಾರವೇಕೆ ಬದಲಾಗುತ್ತಿಲ್ಲ??
ಆಕಾರ ಇದ್ದ ಹಾಗೇ ಇರುತ್ತದೆ।ವಿಕಾರಗಳಷ್ಟೇ ಬೇಗ ಬೇಗ ಬದಲಾಗುತ್ತದೆ।
ಮತ್ತೊಂದು
ಆಹಾರ ಸಮಸ್ಯ ಎಂದಿನವರೆಗೆ?
ಹಸಿವು ಇರುವವರೆಗೆ ಮಾತ್ರ।
ಬರೆದರೆ ಬ್ಲಾಗೆ ತುಂಬಿತು ಅಂತ ನೀವೆನಂತೀರಿ??
Tuesday, December 4, 2007
Subscribe to:
Post Comments (Atom)
1 comment:
ಮಹೇಶ,
ಬೀ ಯವರ " ಬುಲೆಟ್ಟು, ಬಾಂಬು ಮತ್ತು ಭಗವದ್ಗೀತೆ" ಪುಸ್ತಕವನ್ನು ಒಮ್ಮೆ ಓದಿ.
ಅದರಲ್ಲಿಯ ಕೆಲವು ತುಣುಕುಗಳು:
“ಇತ್ಯಾದಿ - ನನಗೆ ತಿಳಿದಿರುವುದು ಇಷ್ಟೇ ಆದರೂ, ‘ಇನ್ನೂ ಹೆಚ್ಚು ತಿಳಿದಿದೆ ಎಂದು ತಿಳಿಯಿರಿ’ ಎನ್ನುವ ಮಂತ್ರ.
ಊದುಬತ್ತಿ - ದೇವರ ಬೀಡಿ
ಬಾಡಿಗಾರ್ಡ್ - ಕುಬುಸ
ಏ - ಅನೇಕರಿಗೆ ಹೆಂಡತಿಯ ಹೆಸರು!”
ಬೀಚಿಗೆ ಬೀಚಿಯೇ ಸಾಟಿ.
Post a Comment