Sunday, January 6, 2008

ಕಾಡ ಬೆಳದಿಂಗಳು

ಅಳಿದು ಅಳಿದು ಪೋಪ ಮಕ್ಕಳಿದ್ದೇಕೆ
ತಿಳಿದು ಬುದ್ಧಿಯ ಪೇಳದ ಗುರುವೇಕೆ!

ಇದನ್ನು ಕಾಡಬೆಳದಿಂಗಳು ಸಿನಿಮಾದಲ್ಲಿ ಸರಸ್ವತಿ ಅಮ್ಮ ಮಕ್ಕಳಿಗೆ ಪಠಿಸುತ್ತಿರುತ್ತಾರೆ. ಮೇಲಿನ ಎರಡೇ ಸಾಲು ಸಾಕು ಈಗಿನದ್ದನು ಹೇಳಲು. ಸುಧೀಷ್ಣೆ ರಾಮೊಹಳ್ಳಿಗೆ ಕಾಲಿಟ್ಟಾಗ ಅಲ್ಲಿ ಕೇವಲ ವಯಸ್ಸಾದ ಹಿರಿ ತಲೆಗಳೆ ಕಾಣುತ್ತವೆ ಅವಳಿಗೆ. ಅವಳಿಗೆ ಸಹಾಯಕನಾಗಿ ದೊರೆಯುವ ಅದೇ ಹಳ್ಳಿಯ ಏಕೈಕ ಹುಡುಗ ಕರಿಯ ಸಹ ಬೆಂಗ್ಳೂರಲ್ಲಿ ಕೆಲಸ ಕೊಡಸ್ತಿರಾ ಅಂತ ಅವಳನ್ನೆ ಕೆಳ್ತಾನೆ. ಹಳ್ಳಿಯ ಯುವಕರು ತಾವು ಕಲೆತ ವಿದ್ಯೆಗೆ ಪ್ರಶಸ್ತ ಸ್ಥಳವೆಂದರೆ ಬೆಂಗಳೂರು ಎಂದು ಅಲ್ಲಿಗೆ ಹೋದೆರೆ. ಮತ್ತೊಂದು ಕಡೆ ರಾಮೊಹಳ್ಳಿ, ಪುಟ್ಟಳ್ಳಿ ಮುಂತಾದ ಸುತ್ತಮುತ್ತಲಿನ ಹಳ್ಳಿಗಳು ಸಂರಕ್ಷಿತ ಅರಣ್ಯಪ್ರದೇಶದಡಿಯಲ್ಲಿ ಬರುತ್ತವೆ ಎಂದು ಅಲ್ಲಿಯ ಜನರನ್ನು ಒಕ್ಕಲೆಬ್ಬಿಸುವ ಸರಕಾರದ ಪ್ರಯತ್ನದ ವಿರುದ್ಧ ಬೆಂಗಳೂರಿಗೂ ಹೋಗದೆ ಮನೆಯ ಮುಖವನ್ನೂ ನೋಡದ ಬೆರಳೆಣೆಕೆಯಷ್ಟು ಯುವಕರಿಂದ ಹೋರಾಟ. ಮಾಹಾನಗರ ಸೇರಿದ ಮಕ್ಕಳ ಪೋಷಕರ ಸಂದರ್ಶನವನ್ನು ತಿರುಚಿ ಪ್ರಸಾರ ಮಾಡಿ ಅದನ್ನೆ ಎನ್ ಕ್ಯಾಶ ಮಾಡಿಕೊಳ್ಳುವ ಮೀಡಿಯಾದವರ ಅತೀ ಬುದ್ಧಿವಂತಿಕೆ. ಇನ್ನೊಂದು ಕಡೆ ಸತ್ತವನು ತನ್ನ ಮಗ ಅಲ್ಲವೆಂದು ಹೇಳಿ ನಿಷ್ಕರುಣಿಯಾಗಿ ಕಾಣುವ ಸದಾಶಿವಯ್ಯನವರು ದ್ವೀತಿಯಾರ್ದದಲ್ಲಿ ಅವರು ಅದಕ್ಕೆ ಕೊಡುವ ಕಾರಣ"ಮಗ ಇನ್ನೂ ಬದುಕಿದಾನೆ ಅಂತ ತಿಳ್ಕೊಂಡೆ ನನ್ನ ಹೆಂಡತಿ ಇನ್ನೂ ಬದ್ಕಿದಾಳೆ ಅವಳಿಗೆ ಅವನು ಸತ್ತು ಹೋದ ಸುದ್ದಿ ಗೊತ್ತಾದ ದಿನವೇ ಅವಳು ಸತ್ತು ಹೋಗುತ್ತಾಳೆ" ಇಂತಹವೆ ಇನ್ನುಷ್ಟು ಹೃದಯಂಗಮ ದೃಶ್ಯಗಳಿವೆ ಕಾಡಬೆಳದಿಂಗಳು ಸಿನಿಮಾದಲ್ಲಿ.

ಎ ಸಿ ಕ್ಯಾಬಿನಲ್ಲಿ ಲ್ಯಾಪಟಾಪ ಮುಂದೆ ಕೂತು, ದೂರದಲ್ಲಿ ಎಲ್ಲೋ ವಿದೇಶದಲ್ಲಿರುವ ಬಾಸಗಳ ಬೈಗುಳಗಳನ್ನೆ ಹೋಗಳಿಕೆಯಾಗಿ ಸ್ವಿಕರಿಸಿ, ವಿಕೆಂಡುಗಳಲ್ಲಿ ಶಾಪಿಂಗು, ಮಲ್ಟಿಪ್ಲೆಕ್ಸು, ಪಬ್ಬು ಕ್ಲಬ್ಬು ಅಂತ ಸುತ್ತುವ ಬಹುತೇಕ ಜನರಿಗೆ ಅಪ್ಪ, ಅಮ್ಮ ನೆನಪಾಗುವುದು ಯಾವುದಾದರು ಹಬ್ಬಗಳಲ್ಲೋ ಅಥವಾ ಆನಿವರ್ಸರಿಗಳಲ್ಲೋ ಮಾತ್ರ. ಇನ್ನೂ ಕೆಲವೊಬ್ಬರಿಗೆ ಇವರನ್ನು ವಿದ್ಯಾವಂತರನ್ನಾಗಿ ರೂಪಿಸುವ ಅಪ್ಪ ಅಮ್ಮಂದಿರು ಅನ್ ಏಜುಕೆಟೆಡ್ ಓಲ್ಡ್ ಪೀಪಲ್ . ಇಂತಹವರೆಲ್ಲರೂ ಒಮ್ಮೆಯಾದರೂ ನೋಡಲೇಬೇಕಾದ ಚಿತ್ರ ಕಾಡಬೆಳದಿಂಗಳು ನೋಡಿದ ನಂತರ ಅಕಸ್ಮಾತ ಪಾಪಪ್ರಜ್ಞೆ ಅಂತ ಏನಾದರೂ ಕಾಡಿದರೆ ಅಪ್ಪ ಅಮ್ಮಂದಿರಿಗೆ ಒಂದು ಕ್ಷಮೆಯನ್ನಾದರೂ ಕೇಳಿ ತಕ್ಕ ಮಟ್ಟಿಗೆ ಪ್ರಾಯಶ್ಚಿತ್ ಪಡಬಹುದು ಕೆಲವೊಬ್ಬರಿಗೆ ಆ ಭಾಗ್ಯವು ಇರುವುದಿಲ್ಲ.

ದುರದೃಷ್ಟದ ಸಂಗತಿಯೆಂದರೆ ನಾವು ಇಂತಹ ಚಿತ್ರಗಳಿಗೆ ಕಲಾತ್ಮಕ ಚಿತ್ರಗಳೆಂದು ಹಣೆಪಟ್ಟಿ ಅಂಟಿಸಿಬಿಡುತ್ತೆವೆ. ಮೊದಲನೆದಾಗಿ ಅವುಗಳಿಗೆ ಚಿತ್ರಮಂದಿರಗಳು ಸಿಗುವುದಿಲ್ಲ ಅದರಿಂದಾಗಿಯೆ ಹೆಚ್ಚು ಜನರನ್ನು ತಲಪುವುದು ಇಲ್ಲ. ಸಿನಿಮಾ ನೋಡದವರು ಜೋಗಿಯವರ ಮನೆ http://jogimane.blogspot.com/2007/07/blog-post_26.html ಯಲ್ಲಿ ಈ ಕತೆಯನ್ನು ಓದಬಹುದು

5 comments:

Anonymous said...

Mahesh avre...uttamavagi kale hakiddeera suddi swarasyavanna,,,,

Neevu bardirodu aksharshaha satya....

esto mandige tamma tamma gf's nenapgtare hortu tande tayigalalla.... Gf's bday avalanna meet madida dinanka, avala jote matadida,coffee kudida dinanka nenapirutte hortu avara astitwakke karaneebhootarada aa devata swaroopi jeevigala huttidahabbada, maduve anniversary dinanka kooda nenapiralla..

bahushaha idanne antaareno effect of globalisation....

ARUN MANIPAL said...

ಹೆಲೊ

ನಿಮಗೆ ಕಿರುತೆರೆ ನಟ "ಸುದೇಶ್ ಕೆ ರಾವ್ "ಗೊತ್ತಾ...?

ಮಹೇಶ ಎಸ್ ಎಲ್ said...

ಹೌದು ಅರುಣ ತಮ್ಮ ಪರಿಚಯ ಆಗಲಿಲ್ಲ ನಿಮ್ಮ ಬ್ಲಾಗ್ ಬೇರೆ ಖಾಲಿ ಖಾಲಿ ಇದೆ

MD said...

ಮಹೇಶ,
ನಿಮ್ಮ ಬರಹಾನೇ ನನ್ನಲ್ಲಿ ಪಾಪಪ್ರಜ್ಞೆ ಹುಟ್ಟಿಸಿತು. ಆದರೆ ಎಲ್ಲರೂ ಎ ಸಿ ಕ್ಯಾಬಿನಲ್ಲಿ ಲ್ಯಾಪಟಾಪ ಮುಂದೆ ಕೂತು ನೀವು ಹೇಳಿದ ಹಾಗೆ ಬಡಬಡಿಸುವ 'ನನ್ನಂಥವರು' ಆಗಿರೋಲ್ಲ.
ಇನ್ನು ಆ ಚಲನಚಿತ್ರ ಏನೆಲ್ಲ ಭಾವನಗೆಳನ್ನು ಕೆರಳಿಸುತ್ತೋ?
ಗುಡ್ ಒನ್

ಸ್ವಗತ.... said...

ಬೆಂಗಳೂರಿನ ಸಾಫ್ಟವೇರ್ ಜನಗಳ ಹಾಗೂ ಬೆಂಗಳೂರಿಗೆ ಬರುವ ಯುವಕರ ಮನೋಭಾವದ ಬಗ್ಗೆ ಬರಿದಿದ್ದಿರ ಮಹೇಶ್...ನಿಮ್ಮ ಮಾತಿನಲ್ಲಿ ಸತ್ತ್ಯಾಂಶವೂ ಇದೆ ಅನ್ನಿ. ಆದರೆ ಬಹಳಸ್ತು ಯುವಕರ ವಿಚಾರ ಮಾಡೋ ದಿಕ್ಕು ಬದಲಾಗಲಿಕ್ಕೆ ಬರಿ ಅವರು ಮಾಡುತ್ತಿರುವ ಕೆಲಸ ಕಾರಣ ಅಲ್ಲ..! ಸಂಪದ್ಭರಿತ ದೇಶ ನಮ್ಮದಾಗಿದ್ದರೂ ಕೂಡ ಅದನ್ನ ಸರಿಯಾಗಿ ಉಪಯೋಗಿಸದೇ ನಮ್ಮ ಕಾಲ ಮೇಲೆ ನಾವೇ ಕಲ್ಲು ಹಾಕಿಕೊಳ್ಳುತ್ತಿದ್ದೇವೆ. ಇದಕ್ಕೆ ನಮ್ಮ ಸುತ್ತ ಇರೋ ಪ್ರತಿ ಒಬ್ಬ ನಿಜವಾಗ್ಲು..ಪ್ರತಿ ಒಬ್ಬ ಪ್ರಜೆಯೂ ಕಾರಣ ಅಂತ ನಾನ್ ಅಂದ್ಕೊಂತೇನೆ..! ಇರಲಿ ಚೆನ್ನಾಗಿ ಬರೆಯುತ್ತಿದ್ದಿರಾ..ದೋಣಿ ಸಾಗಲಿ.
- ಮಲ್ಲಿಕಾರ್ಜುನ್