Wednesday, January 23, 2008

ವಿಮರ್ಶೆಗೊಂದು ವಿಮರ್ಶೆ ಅನ್ಕೊಬಹುದು!



ತುಂಬಾ ಹಳೆಯ ವಿಷಯವೇನಲ್ಲ. ಮೊನ್ನೆಯ ಮೊನ್ನೆಯ ಮಾತು ಒಂದು ತಮಿಳು ಚಿತ್ರದ ಬಗ್ಗೆ ನಮ್ಮ ದೇವಶೆಟ್ಟಿ ಎಂಬ (ವಿ)ಚಿತ್ರ ವಿಮರ್ಶಕರು ವಿಜಯ ಕರ್ನಾಟಕ ಪತ್ರಿಕೆಯ ತುಂಬ ಹೇತರಾಡಿ ಮಾಡಿದ್ರು ಕಡೆಗೆ ಸಿನಿಮಾ ನೋಡಿದರೆ ದೇಹದ ಯಾವ ಭಾಗದಿಂದ ನಗಬೆಕು ಅಂತ ತಿಳಿಲಿಲ್ಲ. ಇನ್ನು ಮೂಲ ವಿಷಯ ಮೊನ್ನೆ ಶುಕ್ರುವಾರ ಬಿಡುಗಡೆಯಾದ ನಮ್ಮೆಲ್ಲರ ಹೆಮ್ಮೆಯ ನಿರ್ದೇಶಕ ಯೋಗರಾಜ ಭಟ್ರ ಗಾಳಿಪಟದ ಚಿತ್ರ ವಿಮರ್ಶೆಯನ್ನ ನಮ್ಮ ದೇವಶೆಟ್ಟಿಯವರು ಶನಿವಾರವೇ ಬರೆದರು "ಮುಂಗಾರುಮಳೆ ಹ್ಯಾಂಗೋವರನಿಂದ ಭಟ್ಟು ಇನ್ನು ಹೊರ ಬಂದಿಲ್ಲ" ಇದು ಚಿತ್ರದ ಒನ್ ಲೈನ ವಿಮರ್ಶೆಯಂತೆ ಅದೂ ಮುಖಪುಟದಲ್ಲಿ ಬಂತು ಇದು ಮುಖಪುಟದ ವಿಷಯವಾ. ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಶುರುವಾದ ತಕ್ಷಣಕ್ಕೆ ತಿಳಿಯುವ ವಿಷಯವೆಂದ್ರೆ ಇದು ಮುಂಗಾರುಮಳೆಯಲ್ಲ ಅಂತ ಹಾಗಂತ ಚಿತ್ರನೋಡಿದ ಪ್ರತಿಯೊಬ್ಬರು ಹೇಳ್ತಾರೆ. ಈ ಶೆಟ್ರು ಮುಂಗಾರುಮಳೆನಾ ತಲೆಲಿಇಟ್ಟುಕೊಂಡು ಗಾಳಿಪಟ ನೋಡಿದ್ರೆ ಅದು ಯೋಗರಾಜ ಭಟ್ರ ತಪ್ಪಾ. ಅಥವಾ ಸಿನಿಮಾ ನೋಡೊಕೆ ಅಂತ ಹೋದಾಗ ಶೆಟ್ರಿಗೆ ಯಾರಾದ್ರೂ ಅಮೇದ್ಯ ಸೇವನೆ ಮಾಡಿಸಿ ಈ ರೀತಿ ಬರೆಸಿದ್ರಾ ಇದನ್ನ ಶೆಟ್ರೆ ಹೇಳಬೇಕು. ಅದೇ ಹಸಿರು, ಅದೇ ಮಳೆ, ಅದೇ ಗಾಳಿ, ಅದೇ ಹಸಿ ಹಸಿ, ಅದೇ ಮಾತು ಅಂತ ಬರಿತಿರಲ್ಲಾ ಮಾತೆತ್ತಿದರೆ ವಿದೇಶ ಅನ್ನೊ ನಮ್ಮ ನಿರ್ದೇಶಕರಿಗಿಂತ ಕರ್ನಾಟಕದಲ್ಲೇ ಇಷ್ಟೊಂದು ಜಾಗಗಳಿವೆ ಅಂತ ತೋರಿಸಿದ್ದು ತಪ್ಪಾ ವಿಮರ್ಶಕರೆ. ಅಥವಾ ನಿಮಗ್ಯಾವುದಾದರು ಹೊಸಾ ಲೊಕೆಶನ್ ಗೊತ್ತಾ ಹ್ಯಾಗೆ? . ಅಲ್ಲಾರಿ ಮುಂಗಾರುಮಳೆ ಸಿನಿಮಾ ಬರೊದಕ್ಕಿಂತ ಮುಂಚೆ ಅದೆ ಮಚ್ಚು, ಅದೇ ಕೊಲೆ, ಅದೇ ಹಳಸಲು ಡೈಲಾಗು, ಅದೇ ಭೂಗತ ಜಗತ್ತು ಅಂತ ರಕ್ತದ ಮಡುವಿನಲ್ಲಿ ಬಿದ್ದು ವದಾಡ್ತಾ ಇದ್ರಲ್ರೀ ಆಗೆಲ್ಲೆದ್ರಿ ? ಓಹೋ ಕ್ಷಮಿಸಿ ಬಹುಶಃ ನೀವು ಆತ್ಮಚರಿತ್ರೆ ಬರೆಯುವುದರಲ್ಲಿ ಬಿಜಿ ಇದ್ರಿ ಅಂತ ಕಾಣುತ್ತೆ. ಕ್ಯಾಮರಾ ಮನ್ ಅಲ್ಲಿಂದ ಇಲ್ಲಿಗೆ ಕರೆಸಿ ಕೊಟ್ಟಿದ್ದು ಇಷ್ಟೇನಾ ಅಂತ ಕೇಳ್ತಿರಲ್ಲಾ, ಒಂದು ಕನ್ನಡ ಸಿನಿಮಾನಾ ಇದಕ್ಕಿಂತ ಅದ್ಭುತವಾಗಿ ಹ್ಯಾಗೆ ತೋರಿಸೊದು ಅಂತ ಸ್ವಲ್ಪಾ ನಮಗೂ ಹೇಳ್ತಿರಾ ವಿಮರ್ಶಕರೇ. ಮನುಷ್ಯರಲ್ಲಿ ವಿಶಾಲ ಮನೋಭಾವಾ ಅಂತ ಒಂದು ಇರುತ್ತೆ ಅದರ ಬಗ್ಗೆ ನಿಮಗೆನಾದ್ರೂ ಗೊತ್ತಾ. ಗಂಡು ಹುಡುಗಿ, ಕಪ್ಪೆ ಮುಖದವಳು, ಏನ್ರಿ ನೀವು ಒಬ್ಬ ಜವಾಬ್ದಾರಿಯುತ ಪತ್ರಕರ್ತರಾಗಿ ಪತ್ರಿಕೆಯಲ್ಲಿ ಹೆಣ್ಣುಮಕ್ಕಳನ್ನ ಕರೆಯುವ ರೀತಿಯಾ ಇದು. ಅಕಸ್ಮಾತ ಈ ಸಿನಿಮಾದಲ್ಲಿ ನಿಮ್ಮ ಮನೆಯ ಹೆಣ್ಣುಮಕ್ಕಳು ಇದ್ದಿದ್ರೆ ಹೀಗೆಲ್ಲಾ ಬರಿತಿದ್ರಾ ಸಾರ್. ಕಪ್ಪೆ ಮುಖದವರು, ಅತೀಲೋಕ ಸುಂದರಿಯರು ಎಲ್ಲರೂ ಮನುಷ್ಯರೆ ಸರ್ ನಿಮಗೆ ಹುಡುಗಿಯರು ಅಂದ್ರೆ ಇಂದ್ರನ ಆಸ್ಥಾನದ ಅಪ್ಸರೆಯರೇ ಆಗಬೇಕೊ?? ಚಿತ್ರದಲ್ಲಿ ಹಂದಿ ಅನವಶ್ಯಕ ಅಂತೀರಲ್ಲಾ ಕಥೆ ಇರೋದೆ ಅಲ್ಲಿ ಮತ್ತು ಅಷ್ಟು ಸಣ್ನ ಕಥಾ ಎಳೆಯಿಂದ ಕನ್ನಡಕ್ಕೆ ಒಂದು ಟೆಕ್ನಿಕಲ್ಲಿ ಅದ್ಭುತ ಎನಿಸುವಂತಹ ಚಿತ್ರ ಕೊಟ್ರು ಅಂತ ನಿಮಗೆ ಅನಿಸಲೇ ಇಲ್ವಾ. ಚಿತ್ರದಲ್ಲಿ ಗಣೇಶನಿಗೆ ಜಾಸ್ತಿ ಇದೆ ನಿಜ ಆದ್ರೆ ಅದು ಕಮರ್ಷಿಯಲ್ ವಿಷಯ ಅಕಸ್ಮಾತ ಗಾಳಿಪಟಕ್ಕೆ ನೀವು ನಿರ್ದೇಶಕರಾಗಿದ್ರೆ ನೀವು ಅದನ್ನೇ ಮಾಡತಿದ್ರಿ. ಸ್ವಾಮಿ ನಿಮ್ಮ ವಿಮರ್ಶೆಯ ಗಾಳಿಪಟದ ಸೂತ್ರ ಕಿತ್ತು ಅಲ್ಲೆಲ್ಲೊ ಪಕ್ಕದ ರಾಜ್ಯದಲ್ಲಿ ಬಿದ್ದಿದೆ ಮೊದಲು ಅದನ್ನ ಹುಡುಕಿ ತನ್ನಿ. ಹೊಗಳ್ತಾ ಇದ್ರೆ ನಿಮ್ಮನ್ನ ಹೊಗಳ್ತಾನೆ ಇರ್ಬೆಕು ಅನ್ಸುತ್ತೆ. ಹೋಗಿ ಸಾರ್ ಇನ್ನೊಂದೆರಡು ಜೀವನಚರಿತ್ರೆ ಬರೆದು ಬನ್ನಿ ಆಮೇಲೆ ಇದ್ದೇ ಇದೆ ನಿಮ್ಮ ವಿಮರ್ಶೆ ಬರೆಯೋದು.ಕನ್ನಡಿಗರಾಗಿ ಕನ್ನಡಿಗರ ಬಗ್ಗೆ ಇಷ್ಟೊಂದು "ವಿಷ" ಸರಿ ಅಲ್ಲ ಹೌದು ನೀವು ಕನ್ನಡಿಗರೆ ತಾನೆ? ಅಲ್ಲಾ ನನಗೆ ಗೊತ್ತಿಲ್ಲಾ

ಕೊನೆಯದಾಗಿ ಗಾಳಿಪಟದಲ್ಲಿ ನಿವು ಗಂಡುಹುಡುಗಿ ಅಂತ ಹೆಸರಿಸಿರೊ ನೀತು ಸ್ಟೈಲ್ ನಲ್ಲೆ ನಿಮ್ಮ ಚಿತ್ರ ವಿಮರ್ಶೆಗೆ ತಡವಾಗಿಯಾದ್ರೂ ನನ್ನ ಕಡೆಯಿಂದ ದೊಡ್ಡದಾಗಿ ಥೂ................

7 comments:

MD said...

ಏನ್ರಿ ಮಹೇಶ,
ಇಷ್ಟೊಂದು ಮರ್ಯಾದೆ ಕೊಡೋದಾ ದೇವಿಶೆಟ್ಟಿ ಅವರಂತಹ ವಿಮರ್ಶಕರಿಗೆ ( ನಿಮ್ದೂ ಅವರ್ದೂ ಹೆಸ್ರು ಸೇಮ್ ಅಂತಾನಾ :-))
ನಿಮ್ಮ ರಾಣೆಬೆನ್ನೂರಿನ ಭಾಷೆಯಲ್ಲಿಯೇ ಒಂದೆರಡು ಮಂತ್ರ ಉಚ್ಛರಿಸಬಾರದಿತ್ತಾ?
ಹಾಗೆಯೇ http://thatskannada.oneindia.in/movies/review/2008/1901-gaalipata.html ದಲ್ಲೂ ಈ ವಿಮರ್ಶಕನ ವಿಮರ್ಶೆಯ ಬಗ್ಗೆ ಓದುಗರ/ನೋಡುಗರ ವಿಮರ್ಶೆ ಓದಿ.

ARUN MANIPAL said...

ಮಹೇಶ್,
ನಾನು thats kannadaದಲ್ಲಿ ವಿಮರ್ಶೆ ಓದಿದ್ದೆ..ಸಿನಿಮಾ ನೋಡಲು ಇಲ್ಲಿ ಸಾಧ್ಯವಾಗದ ಕಾರಣ ದೇವಿಶೆಟ್ಟಿ ಹೇಳಿದ್ದು ಹೌದೇನೊ ಅಂತ ಅಂದುಕೊಂಡಿದ್ದೆ ಆದ್ರೆ ನಿಮ್ಮ ಬರಹ ಓದಿದ ಮೇಲೆ ನನ್ನ ಅಭಿಪ್ರಾಯ ಬದಲಾಯಿತು thank u for information Mahesh.

ಈ ದರಿದ್ರಗಳೇಕೆ ನಮ್ಮವರ ಲೋಪಗಳನ್ನೆ ದೊಡ್ಡದಾಗಿ ಎತ್ತಿ ಹಿಡೀತಾವೆ ..? ನಮ್ಮದೇ ಆದ ಇದೆಲ್ಲದರ ಒಳ್ಳೆತನವನ್ನು ಸ್ವಲ್ಪ ಸಂಭಾಳಿಸಿಕೊಳ್ಳ ಬಾರದ..?

ಮಹೇಶ ಎಸ್ ಎಲ್ said...

ಅದು ಹಾಗೆ ಅರುಣ ಇವರೆಲ್ಲಾ ಎಲ್ಲಿ ನೈವೆದ್ಯ ಜಾಸ್ತಿ ಸಿಗುತ್ತೊ ಅಲ್ಲಿ ಜೈ ಅನ್ನೊ ಜನ ಇವರು. ಇರಲಿ ಸಿನಿಮಾ ನೋಡಿ ಚಿನ್ನಾಗಿದೆ

scrap book... said...

Perfect review of a review :)

ಸ್ವಗತ.... said...

ಅಬ್ಬ...ಕನ್ನಡದವರೇ ಆಗಿ ಕನ್ನಡ ಚಿತ್ರವನ್ನ ಆ ಲೆವೆಲ್ ಗೆ ವಿಮರ್ಶೆ ಮಾಡಿದ್ದಕ್ಕೆ..ಆಗಬೇಕಾಗಿದ್ದೆ ಇದು. ವಿಮರ್ಶೆ ಬೇಡ ಅಂತಲ್ಲ..ಆದ್ರೆ ಈಗಿನ ಕನ್ನಡ ಚಿತ್ರರಂಗ ಅಸ್ಟೇ ಅಲ್ಲ...ಆದರೆ ಕನ್ನಡದ ಪರಿಸ್ಥಿತಿಯಲ್ಲಿ ನಾವು ನಮ್ಮವರನ್ನ ಬೆಂಬಲಿಸಲೇಬೇಕು ಅಂದರೆ ಮಾತ್ರ ನಮ್ಮ ಕೂಗು ಎಲ್ಲರಿಗೂ ಕೇಳೋದು. ಮರಳಿನ ಕನದಷ್ಟಿದ್ದಿದ್ದನ್ನ ಬೆಟ್ಟದ ತೋರಿಸಿ ಹಣ ಗಳಿಸೋ ತಮಿಳು ಮತ್ತು ತೆಲುಗು ಜನಕ್ಕೆ ಅಲ್ಲಿಯವರಾರೂ ಹೀಗೆ ವಿಮರ್ಶೆ ಬರೆಯಲಿಕ್ಕಿಲ್ಲ. ಚೆನ್ನಾಗಿ ಜಾಡಿಸಿದ್ದಿಯ ಮಹೇಶ್, ವಿಮರ್ಶೆಗೊಂದು ವಿಮರ್ಶೆ ತುಂಬ ಚೆನ್ನಾಗಿದೆ..,ಅದಕ್ಕಿಂತ ಹೆಚ್ಚಾಗಿ ನಿಜವಾದ ವಿಮರ್ಶೆ ಅನ್ನಿಸುತ್ತದೆ. ಧನ್ನ್ಯವಾದಗಳು ನಿಜವಾದ ಚಿತ್ರಣ ಕೊಟ್ಟಿದ್ದಕ್ಕೆ.

ಚಿರವಿರಹ said...

ಅಷ್ಟೆಲ್ಲಾ ಕೆಟ್ಟಾದಾಗಿ ಬರೆಯುವಂತೆ ಚಿತ್ರ ಇರಲಿಲ್ಲ.. I am with scrap book nice review of a review

ಸುಧೇಶ್ ಶೆಟ್ಟಿ said...

ಅದೊ೦ದು ದ್ರಾಬೆ, ಪ್ರಾರಬ್ಧ ಮು೦ಡೇದು…. ಇದಕ್ಕಿ೦ತಲೂ ಕೆಟ್ಟದಾಗಿ ಮನಸ್ಸಿನಲ್ಲಿ ಬಯ್ದಿದ್ದೇನೆ. ಅಷ್ಟು ಚೆನ್ನಾಗಿರುವ ಸಿನಿಮಾವನ್ನು ಹಾಗೆ ವಿಮರ್ಶೆ ಮಾಡಿದ್ದಾರಲ್ಲ, ಅವರೇನು ಸಿನಿಮಾವನ್ನು ಕಣ್ಣಿನಿ೦ದ ನೋಡಿದರೋ ಅಥವಾ ಇನ್ನೆಲ್ಲಿ೦ದಾದರೂ ನೋಡಿದ್ದಾರೋ?. ಅದೂ ಮುಖಪುಟದಲ್ಲಿ ಅ೦ತಹ ವಿಮರ್ಶೆ. ಈ ವಿಜಯಕರ್ನಾಟಕಕ್ಕೆ ಎನಾದರೂ ತಿಕ್ಕಲು ಇದೆಯಾ? ಚೆನ್ನಾಗಿ ಜಾಡಿಸಿದ್ದೀರ ಮಹೇಶ್.