ಉಸಿರಾಡುತ್ತಿದ್ದೆ
ಕನವರಿಸುತ್ತಿದ್ದೆ
ನಿನಗಾಗಿ ಮಿಡಿಯುತ್ತಿದ್ದೆ
ಹೇಗೆ ಹೇಳಲಿ ನಿನಗೆ
ನಾನಾಗಲೇ ಹೆಣವಾಗಿದ್ದೆ
ನದಿ ಮನಸಿನ ನೀ
ಹರಿಯುತ್ತಿದ್ದೆ ಮೋಹದ ಕಡಲೆಡೆಗೆ
ಹಳ್ಳದಂತೆ ನಿಂತಿದ್ದೆ ನಾ
ಕೊಚ್ಚಿಕೊಂಡು ಹೋದೆ ನೀ!
ನಿನ್ನೊಂದಿಗೆ ಹರಿಯುತ
ಜಲಪಾತದಂಚಿಗೆ ತಲುಪಿದೆ ನಾ
ನೀನೆನೋ ಭೋರ್ಗರೆದೆ
ನಿನ್ನೊಂದಿಗೆ ಬಂದ ನಾ ಧುಮುಕಿ ಹೆಣವಾದೆ!
ಆದರೂ ಉಸಿರಾಡುತ್ತಿದ್ದೆ ನಾ
ಕನವರಿಸುತ್ತಿದ್ದೆ
ನಿನಗಾಗಿ ಮಿಡಿಯುತ್ತಿದ್ದೆ
ಹೇಗೆ ಹೇಳಲಿ ನಿನಗೆ
ನಾನಾಗಲೇ ಹೆಣವಾಗಿದ್ದೆ
6 comments:
ನದಿ ಮನಸಿನ ನೀ
ಹರಿಯುತ್ತಿದ್ದೆ ಮೋಹದ ಕಡಲೆಡೆಗೆ
ಹಳ್ಳದಂತೆ ನಿಂತಿದ್ದೆ ನಾ
ಕೊಚ್ಚಿಕೊಂಡು ಹೋದೆ ನೀ!
Superb guru...!
ಕವಿತೆ ಚೆನ್ನಾಗಿದೆ :-)
ಧನ್ಯವಾದಗಳು. ಅರುಣ , ಸ್ವಗತ
ಕವಿತೆ ಚೆನ್ನಾಗಿದೆ.
ಚಿತ್ರ ಕೂಡ ದುಃಖಕ್ಕೆ ಬರೆ ಕೊಡುವಂತಿದೆ.
ಮುಂದಿನ ಸಲ ಹುಡುಗ/ಹುಡುಗಿ ಬಿಟ್ಟು ಹೋಗದಿರುವಂತಹ ಒಂದು ಕವಿತೆ ನೀಡುತ್ತೀರಾ:-)
ತುಂಬಾ ಚನ್ನಾಗಿದೆ
Post a Comment