Sunday, March 2, 2008

ಬೆಂದ ಮನಸ್ಸುಗಳಿಗೆ ಸಾಂತ್ವನದ ಕೈ ಇಂತಿ ನಿನ ಪ್ರೀತಿಯ


ಯಾರೊ ಯಾರೊ ಯಾರೊ
ಒಲಿದೊರು ಯಾರೊ
ನಿನ್ನ ತೊರೆದೊರು ಯಾರೊ
ಜೊತೆಗುಳಿದೊರೊ ಯಾರೊ
ಕಡೆಗುಳಿಯೊರು ಯಾರೊ.
ಅವಳು ಕಾರಣ ಹೇಳದೆ ಹೊರಟು ಹೋಗುತ್ತಾಳೆ. ಇವನು ಕುಡಿತದಲ್ಲಿ ಕಾರನ ಹುಡುಕುವ ಪ್ರಯತ್ನ ಪಡುತ್ತಾನೆ. ಕಾರಣ ಮಾತ್ರ ಸಿಗುವುದೆ ಇಲ್ಲ ತಿರುಗಿ ನೋಡಿದರೆ ಜೀವನದ ಆರು ತುಂಬು ವರ್ಷಗಳು ಕೇವಲ ಖಾಲಿ ಕಾಗದ.
ಪ್ರೀತಿಯ ಮಳೆಯಲ್ಲಿ ಬೆಂಕಿಯ ಕೊಡೆಕೊಟ್ಟು ನಿಲ್ಲಿಸದವರಾರೊ
ಪ್ರೀತಿಯ ಹೊಳೆಯಲ್ಲಿ ಇಜಲು ಬರದವನ ಬಿಳಿಸಿದವರಾರೊ ಮುಳುಗಿಸಿದವರಾರೊ.

ಸೂರಿಯವರಲ್ಲದೆ ಬೇರೆ ಯಾರು ಮಾಡಿದ್ದರು ಈ ಸಿನಿಮಾ ಇಷ್ಟೊಂದು ಮನ ಮುಟ್ಟುತ್ತಿರಲಿಲ್ಲ.ಆದರೆ ಬೇರೆಯವರಿಗೆ ಈ ತರಹದ ವಿಷಯಗಳು ಸಿಗಬೇಕಲ್ಲ. ಚಿತ್ರದ ಶುರುವಿನಲ್ಲಿ ನಾಯಿ ಸೀನಪ್ಪನ ಗಾಡಿಯಲ್ಲಿ ಒಂದು ಅನಾಥ ಮಗುವಿನ ಶವದ ಜೊತೆ ಕಿಟ್ಟಿಯ ಸಂಭಷಣೆ ಹೀಗಿದೆ " ಪುಟ್ಟಿ ನಾನು ನೀನು ಫ್ರೆಂಡ್ ಆಗೋಣ ಇದು ನಿನ್ನ ಗಿಫ್ಟು ನಿನಗೆ ಒಂದು ಹೆಸರು ನೀಲಿ ಹೂ " ಬದುಕಿನ ಪ್ರತಿಯೊಂದು ಮಗ್ಗಲು ಗಳನ್ನ ಸೂರಿ ತಮ್ಮ ಕುಂಚದಿಂದ ಹ್ಯಾಗೆ ಬಿಡಿಸಿಡುತ್ತಾರೆ ಅಂದ್ರೆ ಅದು ನೋಡಿಯೆ ಅನುಭವಿಸಬೇಕು. ಇಲ್ಲಿ ಕೇವಲ ಪ್ರೀತಿಯಿಲ್ಲ ಅದರವೆಗಿನ ನಗ್ನ ಬದುಕಿದೆ ಅದರೊಳಗಿನ ತಿಕ್ಕಲುತನಗಳಿವೆ ನಮ್ಮೆಲ್ಲರಲ್ಲು ಇರುವಂತಹವೆ.
ನಗುವನು ತುಟಿಗಿಟ್ಟೊರು ಯಾರೊ
ಕನಸುಗಳನು ಸುಟ್ಟೊರು ಯಾರೊ
ಪ್ರೀತಿಯ ಬಲಿ ಕೊಟ್ಟೊರು ಯಾರೊ
ಉತ್ತರಿಸೊರು ಯಾರೊ.

ಉತ್ತರ ಯಾರಲ್ಲಿದೆ ಕಾರಣ ಹೇಳದೆ ಹೊರಟು ಹೋದವಳಲ್ಲು ಇಲ್ಲ ಉಳಿದುಹೋದವನಲ್ಲು ಇರುವುದಿಲ್ಲ. ಇದು ಬರಿ ಸಿನಿಮಾ ಅಂತ ಅನ್ನಿಸೊದೆ ಇಲ್ಲ ಒಂದು ಸಾಮಾನ್ಯನ ಬದುಕಿದ ಅವನ ಮುರಿದುಹೋದ ಕನಸಿನ ತುಣುಕಿದೆ . ಕೈಹಿಡಿಯುವ ಕುಡಿತ
ಎಲ್ಲಿಗೆ ತಂದು ನಿಲ್ಲಿಸುತ್ತೆ ಅನ್ನೊ ಸತ್ಯವಿದೆ .
ನನ್ನ ಅವಳಒಲವಿಗೆ
ಕೊನೆಯೆ ಇರದ ಕಡಲಿಗೆ
ಸಾವೇ ಬರದ ನೆನಪಿಗೆ
ಅಂತ್ಯವು ಎಲ್ಲಿದೆ

.ಪ್ರತಿಯೊಬ್ಬರ ಬದುಕಿನ ಯಾವುದೊ ಒಂದು ಹಂತದಲ್ಲಿ ಪ್ರೀತಿ ಅನ್ನೊ ಎರಡುವರೆ ಅಕ್ಷರ ಹಾದು ಹೋಗಿರುತ್ತೆ ಆದರೆ ಅದಕ್ಕೆ ಸಾವು ದೇವ್ರಾಣೆಗು ಬರಲ್ಲ ಅದು ಹೋಗೊದು ಎನಿದ್ರು ನಮ್ಮೊಂದಿಗೆನೆ. ಇದನ್ನ ಸೂರಿ ಅದ್ಭುತವಾಗಿ ಪರದೆಗಿಳಿಸಿದ್ದಾರೆ ಕಿಟ್ಟಿ ಕೂಡ ಅಷ್ಟೇ ಅದ್ಭುತವಾಗಿಸಿನಿಮಾ ಪೂರಾ ಆವರಿಸಿದ್ದಾರೆ ಕಿಟ್ಟಿ ಅಭಿನಯ ಆ ಕಂಠ ಸಿನಿಮಾ ನೋಡಿ ಅಚೆ ಬಂದರು ಮತ್ತೆ ಮತ್ತೆ ಕಡುತ್ತೆ. ಕಳೆದು ಹೋದ ಯಾರೊ ತಟ್ಟನೆ ನೆನಪಿನಂಗಳಕೆ ಲಗ್ಗೆ ಹಾಕುತ್ತಾರೆ. ಅದು ಸೂರಿ ನಮ್ಮನ್ನು ಆವರಿಸುವ ರೀತಿ. ಈ ಕೆಲಸ ಬೇರೆ ಯಾರಿಂದಲು ಸಾಧ್ಯವಿಲ್ಲ. ಸರಳವಗಿ ಹೇಳುವುದಾದರೆ " ಇದು ಬೆಂದ ಮನಸ್ಸುಗಳಿಗೆ ಒಂದು ಸಾಂತ್ವನದ
ಕೈಗನ್ನಡಿ, ಪ್ರೀತಿಯ ಮತ್ತೊಂದು ಮಗ್ಗಲು
ಒಂದೊಂದೆ ಬಚ್ಚಿಟ್ಟ ಮಾತು
ಒಂದೊಂದಾಗಿ ಕೂಡಿಟ್ಟ ಕವನ

7 comments:

ಸಂತೋಷಕುಮಾರ said...

ಮೊದಲ ವಾರದಲ್ಲೇ ನಾನೂ ಚಿತ್ರ ನೋಡಿದೆ. ಚಿತ್ರದ ದಾಟಿ ತುಂಬಾ ಇಷ್ಟವಾಯಿತು. ನಿಮ್ಮ ಬ್ಲಾಗು ನೋಡಿ ಕುತೂಹಲವೂ ಜಾಸ್ತಿ ಆಗಿತ್ತು ಅನ್ನಿ. ನಿಮ್ಮ ವಿಮರ್ಶೆಯನ್ನು ಇದಿರು ನೋಡುತ್ತಿದ್ದೆ. ಆ ಕತ್ತಲು,ತೀರಾ passionate ಆಗಿ ಪ್ರೀತಿಸುವ ಮೋದ,ಕಳೆದು ಹೋದ ಅವಳನ್ನು ರಾಜಿ ಧ್ಯಾನಿಸುವ ಪರಿ,Odffcourse, ನಂಗೆ ನಾಯಕಿಯೂ ತುಂಬಾ ಇಷ್ಟವಾದಳಪ್ಪ್ಪಾ, ಇನ್ನೊಮ್ಮೆ ನೋಡಲು ಹೋದ್ರೆ ನಾಯಕಿಯೂ ಅದಕ್ಕೆ ಕಾರಣವಾಗುತ್ತಾಳೆ. ಅದ್ರೆ ಕೆಲವೋಮ್ಮೆ ಸೂರಿ ತುಂಬಾ ಸ್ಯಾಡಿಸ್ಟ ಅನಿಸಿಬಿಡ್ತಾರೆ ಅಲ್ವಾ? ಅಷ್ಟೊಂದು ಹೆಣಗಳನ್ನು ಉರುಳಿಸಿಬಿಡುತ್ತಾರೆ, ಹೆಣದ ಬಗ್ಗೆ ಎನೋ ಸೆಂಟಿಮೆಂಟ್ ಅನಿಸುತ್ತೆ :). ಆದರೂ ಕುಡಿತದ ದೃಶ್ಯಗಳು ಕುಟುಂಬದೋಂದೆಗೆ ಕೂತು ನೋಡಲು ಮುಜುಗರ ಮೂಡಿಸುತ್ತವೆ ಅಲ್ವಾ? ವಾಸನೆ ಬಾಬು ಸೂಪರ್, ಭಾವನಾ ಹಾಡಿನಲ್ಲಿ ಸಕ್ಕತ್ ಹಾಟ್ ಕಣ್ರಿ.

ನಿಮ್ಮ ಬರಹದಲ್ಲಿ ಈ ಸಾಲು ತುಂಬಾ ತಟ್ಟಿತು "ತಿರುಗಿ ನೋಡಿದರೆ ಜೀವನದ ಆರು ತುಂಬು ವರ್ಷಗಳು ಕೇವಲ ಖಾಲಿ ಕಾಗದ".

ಒಮ್ಮೆ ಕನ್ನಡಪ್ರಭದಲ್ಲಿ ಬಂದ ವಿಮರ್ಶೆಯನ್ನೂ ಸಹ ನೋಡಿ, ಅದೂ ಸಹ ಚಿತ್ರದಷ್ಟೆ ಚೆನ್ನಾಗಿದೆ..

ಮಹೇಶ ಎಸ್ ಎಲ್ said...

ಸಂತೋಷ ತುಂಬಾ ಸ್ಯಾಡಿಸ್ಟ ಅನ್ನೊದಕ್ಕಿಂತ ಬದುಕಿನ ಇನ್ನೊಂದು ಮುಖ ತೋರಿಸ್ತಾ ಇದಾರೆ ಅನ್ನಸಲ್ವಾ .

MD said...

ಮಹೇಶ,
ಇಲ್ಲಿ ಓದಿ. ನನಗನಿಸುತ್ತೆ ಇದು ಸರಿಯಾದ ವಿಮರ್ಶೆ.
http://www.kendasampige.com/preview/?p=685

ಗಿರೀಶ್ ರಾವ್, ಎಚ್ (ಜೋಗಿ) said...

ಸಿನಿಮಾ ಬಗ್ಗೆ ಬರೆದದ್ದು ಚೆನ್ನಾಗಿದೆ. ನನಗೂ ಸಿನಿಮಾ ಅಲ್ಲಲ್ಲಿ ಇಷ್ಟವಾಯಿತು. ಒಂದು ಕವಿತೆಯಲ್ಲಿ ಮನಸ್ಸಲ್ಲಿ ಉಳಿಯುವ ಒಂದು ಸಾಲು ಸಿಕ್ಕರೆ ಸಾಕಲ್ಲ. ಹಾಗೇ ಒಂದು ಸಿನಿಮಾದಲ್ಲಿ ಕಾಡುವ ಒಂದು ದೃಶ್ಯ ಸಿಕ್ಕರೂ ಸಾಕು. ಆದರೆ ಸಿನಿಮಾ ಕೋಟ್ಯಂತರ ರುಪಾಯಿ ವ್ಯವಹಾರ ಆಗಿರೋದರಿಂದ ಇಂಥ ನಿರೀಕ್ಷೆಗಳಿಗೆ `ಅರ್ಥ' ಇರೋದಿಲ್ಲ.
-jOGI

ಮಹೇಶ ಎಸ್ ಎಲ್ said...

sathyavaad maatu sir

ಸುಧೇಶ್ ಶೆಟ್ಟಿ said...

ನನಗೂ ತು೦ಬಾ ಇಷ್ಟವಾಯಿತು. ಎರಡು ಸಲ ನೋಡಿದೆ. ನನ್ನ ಗೆಳೆಯ ಮಾತ್ರ ‘not upto the mark’ ಅ೦ದ. ’your taste is not upto the mark’ ಅ೦ತ ನಾನ೦ದೆ.

ashwini said...

sir realy inti ninna pritiya movie prati obba preme yaru tanna priti kalkondaga anubaviso novu chennagi express agide adre avan hudugi adu hege chane agi maduve ge opkotale avalge eghe mareyoke sadya anta yak sir torsilla prathi obba ennu gandiginta thumba bhavukalu sir adru eghe kelvaru maritare sir novaguthe sir baduke bheda ansuthe sir satru mane aware mukya anta madyyadalle dura ohda sir sayo prayatna madidru savu atra barlila dina savanne nirikishe madta jothege en adru sadisi ortogo miditane edeli ede sir awan nenpu nann kolluthe sir awan eltane maduve agi chenagiru anta awan badkidane sattila nann eghe marili sir awana badukiddagle marethogu anta elta nan koltane dura eddini adru novu tadkotini bt one day i can t that time nan elde kaveri palagogbheku ansuthe yak prithi madide gottila yak bitt ohgbheku ansuthe gotila ega 23 year life istene ansuthe