ತುಂಬ ದಿನಗಳಿಂದ ಎನನ್ನೂ ಬರೆದಿಲ್ಲ ಅದು ನನ್ನ ಸೊಮಾರಿತನ.
. ಸಂತೋಷದ ವಿಷಯವೆಂದರೆ ಗೆಳಯ ಎಮ್ ಡಿ ಅತಿ ರಭಸವಾಗಿ ಮುನ್ನುಗ್ಗುತ್ತಿದ್ದಾನೆ. ಮೊನ್ನೆ ಮೊನ್ನೆ ಅವನ ಬಾಂಬೇ ಟೇಲರ್ - ಲೇಡೀಸ್ ಬ್ಲೌಸ್ (!) ಸ್ಪೇಶಾಲಿಸ್ಟ ದಟ್ಸ್ ಕನ್ನಡ ಅಂರ್ತಜಾಲ ಪತ್ರಿಕೆಯಲ್ಲಿ ಪ್ರಕಟವಾಗಿತ್ತು
ತುಂಬ ಸುಂದರವಾದ ಕಥೆ ಅದು ಒಮ್ಮೆ ಓದಿ ನೋಡಿ ಒಂದು ಒಳ್ಳೆಯ ಓದಿಗೆ ಖಂಡಿತ ಮೋಸವಿಲ್ಲ. ಮತ್ತೊಂದು ಕಡೆ ಗೆಳೆಯ ಸಂತೋಷರ ಅಮೃತ ಸಿಂಚನ ನಿಜಕ್ಕೂ ಅದ್ಭುತವಾಗಿ ಸಾಗಿದೆ. ಅವರ ಹೋಳಿಯ ಮೆಲುಕು... ಬರಹದಲ್ಲಿ ಉತ್ತರ ಕರ್ನಾಟಕದ ಸಮಸ್ತ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ ಉತ್ತರಕರ್ನಾಟಕ ಅಂದಿದ್ದಕ್ಕೆ ಕ್ಷಮೆ ಇರಲಿ ಉತ್ತರ ಕರ್ನಾಟಕ, ಉತ್ತರಕನ್ನಡ, ದಕ್ಷಿಣಕನ್ನಡ ಇವೆಲ್ಲಾ ನಾವು ಮಾಡಿಕೊಂಡಿರುವ ಮುಚ್ಚಲಾರದಂತಹ ಕಂದರಗಳು ಎಂದಾದರು ಮುಚ್ಚುತಾವೆಯೆ?? ಮತ್ತೊಂದೆಡೆ ಚುನಾವಣೆಯ ಭರಾಟೆ ಜೋರಾಗಿ ಶುರುವಾಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ. ನಮ್ಮನ್ನು ಮತ್ತು ನಮ್ಮೆಲ್ಲರನ್ನೂ ಸಾಕುತ್ತಿರುವ ಈ ಬೆಂಗಳೂರಿನ ರಸ್ತೆ ಬದಿಯ ಗೋಡೆಗಳನ್ನು ಆ ಕೆಂಪೆಗೌಡರೆ ಕಾಪಾಡಬೇಕು. ಇನ್ನೂ ಪತ್ರಿಕೆಗಳ ವಿಷಯಬಿಡಿ ಅದರ ಬಗ್ಗೆ ಹೇಳುವದಾದರೆ ಮತ್ತೊಂದು ಬ್ಲಾಗನ್ನೆ ಹುಟ್ಟುಹಾಕಬೇಕು. ಚುನಾವಣೆ ಇಲ್ಲದ ದಿನಗಳಲ್ಲೆ ಸಹಿಸಿಕೊಳ್ಳುವುದು ಕಷ್ಟಸಾಧ್ಯ ಇನ್ನೂ ಚುನಾವಣೆ ಪ್ರಕಟವಾದರೆ ಮುಗಿಯಿತು. ಇದಕ್ಕೆ ಪೂರಕವೆಂಬಂತೆ ರವಿ ಬೆಳಗೆರೆಯವರು ಕಳೆದ ಸಾರಿಯ ತಮ್ಮ ಸಂಪಾದಕಿಯದಲ್ಲಿ ಸರಿಯಾಗಿಯೆ ಬರೆದಿದ್ದಾರೆ. ಪತ್ರಿಕೆಯ ಜಾಹೀರಾತು ಮತ್ತು ಗೋಡೆ ಬದಿಯ ವಿನೈಲ್ ಭೂತಗಳಿಂದ ನಮಗೆ ಮುಕ್ತಿ ಎಂದೊ . ಕಡೆಯದಾಗಿ ಇನ್ನೊಂದು ಮಾತು ಯೋಗರಾಜ ಭಟ್ರು ಮತ್ತೊಂದು ಹಾಡನ್ನ ಅರಮನೆ ಚಿತ್ರಕ್ಕಾಗಿ ಬರೆದಿದ್ದಾರೆ "ನನ್ನ ಎದೆಯಲಿ ಇಟ್ಟ ನಾಕು ಹೆಜ್ಜೆಯ ಗುರುತು ಅಳಿಸಿ ಬಿಡು" ಸುಂದರವಾದ ಸಾಹಿತ್ಯವಿರುವಂತಹ ಹಾಡು. ಅದರ ಬಗ್ಗೆ ಮತ್ತೊಮ್ಮೆ ಸವಿಸ್ತಾರವಗಿ ಬರೆಯುತ್ತೆನೆ ಎಮ್ ಡಿ ಯದೆ ಇನ್ನೊಂದು ರಾಪ್ಚಿಕ್ ಪದ್ಯ ಕಣ್ಣು-ನೋಟ ಓದುವುದನ್ನ ಮರೆಯಬೇಡಿ ಧನ್ಯವಾದಗಳೊಂದಿಗೆ ನಿಮ್ಮ

5 comments:
ತುಂಬಾ ಸೋಮಾರಿತನ ಒಳ್ಲಯದಲ್ಲ.. Come back with good story.
"ಮೊನ್ನೆ ಎಲ್ಲೋ ಬ್ಲಾಗಿಗರ ಕೂಟ ಇತ್ತಂತೆ...... ಅದೆಲ್ಲೋ ಡಿ.ವಿ.ಜಿ ಯವರ ಹುಟ್ಟುಹಬ್ಬದ ಕಾರ್ಯಕ್ರಮ ಆಯಿತಂತೆ.... ಜೋಗಿಯವರ ಪುಸ್ತಕ ಬಿಡುಗಡೆಗೆ ನೀವು ಹೋಗಿದ್ರಾ? ಯಾವಾಗ ಎಲ್ಲಿ ನಡೆಯಿತು?..... ಮೈಸೂರ ಮಲ್ಲಿಗೆ ನಾಟಕ ನೋಡುವಾಸೆ ತುಂಬಾ ಇತ್ತು, ಆದ್ರೆ ಅದ್ಯಾವಾಗ ಪ್ರಸಾರ ಆಯ್ತೋ ಗೊತ್ತೇ ಆಗಲಿಲ್ಲ " ಹೀಗೆಯೇ ಇನ್ನೂ ಅನೇಕ ಅಯ್ಯೋಗಳ ಪಟ್ಟಿ ಬೆಳೆಯುತ್ತೆ. ಇಂತಹ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾವು ನಮಗೆ ಗೊತ್ತಾಗದೇ ಹೋದುದಕ್ಕಾಗಿ ಕಳೆದುಕೊಂಡಿದ್ದೇವೆ.
ಈ ಕೊರಗನ್ನು ನೀಗಿಸಲು ಏನು ಮಾಡಬಹುದು ಎಂದು ತಲೆ ಕೆರೆದುಕೊಂಡಾಗ ಹೊಳೆದಿದ್ದೇ 'ಇದೊಂದು ಪ್ರಕಟಣೆ' ಎಂಬ ಬ್ಲಾಗ್.
www.prakatane.blogspot.com
ಬೆಂಗಳೂರಿನಲ್ಲೇ ಆಗಲಿ, ಕರ್ನಾಟಕದಲ್ಲೇ ಆಗಲಿ ಅಥವಾ ಪ್ರಪಂಚದ ಯಾವುದೇ ಮೂಲೆಯಲ್ಲೇ ಆಗಲಿ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಮ್ಮ 'ಇದೊಂದು ಪ್ರಕಟಣೆ' ಬ್ಲಾಗಿಗೆ ಕಳಿಸಿ. ನಾವು ಪ್ರಕಟಿಸುತ್ತೇವೆ.
ನೀವು ಮಾಡಬೇಕಾದುದಿಷ್ಟೇ. ನಿಮಗೆ ಯಾವುದಾದರೂ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ತಿಳಿದಿದೆಯೇ prakatane@gmail.com ಗೆ ಒಂದು ಮಿಂಚಂಚೆ ಕಳಿಸಿ.
ನಿಮಗೆ ಈ ವಾರದಲ್ಲಿ/ವಾರಾಂತ್ಯದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ತಿಳಿಯಬೇಕೆ? 'ಇದೊಂದು ಪ್ರಕಟಣೆಗೆ' ಭೇಟಿ ಕೊಡಿ.
ಇದು ನಿಮ್ಮಿಂದ ನಿಮಗಾಗಿ ನಿಮಗೋಸ್ಕರ ಹುಟ್ಟಿದ ಬ್ಲಾಗ್. ಇದರ ಜವಾಬ್ದಾರಿಯೂ ನಿಮ್ಮೆಲ್ಲರದೇ.
I apologize for spamming, but no other way to inform :-(
ನಮಸ್ಕಾರ ಮಹೇಶ್, ನಿಮಗೊಂದು ಆಹ್ವಾನ ಪತ್ರಿಕೆ..
ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.
ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.
http://saadhaara.com/events/index/english
http://saadhaara.com/events/index/kannada
ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.
ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.
ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.
-ಕನ್ನಡಸಾಹಿತ್ಯ.ಕಾಂ ಬಳಗ
ದಯಮಾಡಿ ಬನ್ನಿ ಮತ್ತು ಹೀಗೆ ಸ್ಪಾಮ್ ಮಾಡಿ ಆಹ್ವಾನಿಸುತ್ತಿರುವುದಕ್ಕೆ ಕ್ಷಮೆಯಿರಲಿ.
ಗುರು
ನಿಮ್ಮ ಬ್ಲಾಗಿಗೆ ಮೊದಲ ಭೇಟಿ. ನಿಮ್ಮ ಗೆಳೆಯರ ಬಾ೦ಬೆ ಟೇಲರ್ ಕಥೆ ಚೆನ್ನಾಗಿತ್ತು. ನಿಮ್ಮ ಸಿನಿಮಾ ವಿಮರ್ಶೆ ನನಗೆ ತು೦ಬಾ ಖುಷಿ ಕೊಟ್ಟವು.
ಮಹೇಶ್ ನಿಮ್ಮ ಬ್ಲಾಗಿಗೆ ಇದು ನನ್ನ ಮೊದಲ ಬೇಟಿ. ನಿಮ್ಮ ಲೇಖನ ಚೆನ್ನಾಗಿದೆ. ನೀವು ಸಿನಿಮಾ ವಿಮರ್ಶೆಗಳನ್ನು ಓದುತ್ತೇನೆ.. ಮತ್ತೆ ಯೋಗರಾಜ ಭಟ್ಟರು ಬರೆದ "ನನ್ನ ಎದೆಯಲಿ ಇಟ್ಟ ನಾಕು ಹೆಜ್ಜೆಯ ಗುರುತು ಅಳಿಸಿ ಬಿಡು" ಹಾಡಂತೂ ನನ್ನ ಫೇವರೇಟ್. ಆ ಹಾಡನ್ನು ನನ್ನ ಮೊಬೈಲಿನಲ್ಲಿ ಹಾಕಿಕೊಂಡು ಕೇಳುತ್ತಿರುತ್ತೇನೆ....
ಮತ್ತ ಬಿಡುವಾದಾಗ ನನ್ನ ಬ್ಲಾಗಿನ ಕಡೆಗೆ ಬನ್ನಿ.
ನನ್ನ ಬ್ಲಾಗ್ :http://chaayakannadi.blogspot.com/
ಧನ್ಯವಾದಗಳು.
Post a Comment